ಹುಮನಾಬಾದ್ ನಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರ ದಾಳಿ : PFI, SDPI ಮುಖಂಡರ ಬಂಧನ
ಗರ್ವಿತ್
ಮಾತೃಭೂಮಿ
ವರದಿ:- ಶ್ರೀಮಂತರಾವ್ ಇಂಚುರೆಹುಮ್ನಾಬಾದ್ : ಪಿಎಫ್‌ಐ ಮತ್ತು ಎಸಿಪಿಐ ಸಂಘಟನೆ ಮುಖಂಡರ ಮನೆ ಮೇಲೆ ಮಂಗಳವಾರ ಬೆಳಗಿನ ಜಾವ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.ಪಿಎಫ್‌ಐ ಸಂಘಟನೆಯ ಜಿಲ್ಲಾಧ್ಯಕ್ಷ ಅಬ್ದುಲ್ ಕರೀಮ್ ಹಾಗೂ ಎಸ್ಟಿಪಿಐ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶೇಖ್ ಮನ್ಸೂದ್ ಅವರನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ.ಮಂಗಳವಾರ ಬೆಳಗಿನ ಜಾವ ಸುಮಾರು 4 ಗಂಟೆಗೆ ಎರೆಡು ತಂಡ ರಚಿಸಿಕೊಂಡ ಅಧಿಕಾರಿಗಳು ಏಕಕಾಲಕ್ಕೆ ಮನೆಗಳ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ನಂತರ ತಹಸೀಲ್ದಾರ್ ಎದುರಿಗೆ ಹಾಜರುಪಡಿಸಿ ಜೈಲಿಗೆ ಕಳುಹಿಸಿದ್ದಾರೆ.ಎನ್‌ಐಎ ತನಿಖಾ ತಂಡ ದೇಶದ ವಿವಿಧೆಡೆ ಪಿಎಫ್‌ಐ ಮತ್ತು ಎಸ್ಟಿಪಿಐ ಮುಖಂಡರನ್ನು ಬಂಧಿಸಿ ವಿಚಾರಣೆನಡೆಸುತ್ತಿರುವುದನ್ನು ಖಂಡಿಸಿ ಸೆ.23 ರಂದು ಹುಮನಾಬಾದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಸಂದರ್ಭದಲ್ಲಿ ಪ್ರಚೋದನಕಾರಿ ಭಾಷಣ ಹಾಗೂ ಘೋಷಣೆ ಕೂಗಿದ ಹಿನ್ನಲೆಯಲ್ಲಿ ಸಂಘಟನೆಗಳ ಮುಖಂಡರ ಬಂಧನ ನಡೆದಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಬಾಬು ಅವರ ಮಾರ್ಗದರ್ಶನದಲ್ಲಿ ಎಸಿಪಿ ಶಿವಾಂಶು ರಾಜಪೂತ್, ಸಿಪಿಐ ಶರಣಬಸಪ್ಪ ಕೋಡ್ಲಾ ಪಿಎಸ್‌ಐ ಮಂಜನಗೌಡಾ ಪಾಟೀಲ ಹಾಗೂ ಸಿಬ್ಬಂದಿಗಳ ಇದ್ದರು. ಮುಂಜಾಗ್ರತಾ ಎರೆಡು ಡಿಆರ್ ತಂಡ ನಿಯೋಜನೆ ಮಾಡಲಾಗಿದೆ.ಬೆಳಗಾವಿಯಲ್ಲಿ ವಿದ್ಯಾರ್ಥಿಗೆ ಚಾಕು ಇರಿತ : ಸ್ಥಳದಲ್ಲಿ ಬಿಗುವಿನ ವಾತಾವರಣ