ಬೆಲೆ ಏರಿಕೆಯೆ ಕೇಂದ್ರ ಸರ್ಕಾರದ ಸಾಧನೆ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ
ಬೆಲೆ ಏರಿಕೆಯೆ ಕೇಂದ್ರ ಸರ್ಕಾರದ ಸಾಧನೆ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ
ಬೀದರ್ ಜಿಲ್ಲೆ ಚಿಟಗುಪ್ಪ ತಾಲೂಕಿನ ಮನ್ನಾಖೇಳಿ ಯಲ್ಲಿ ದಕ್ಷಿಣ ವಿಧಾನಸಭೆ ಕ್ಷೇತ್ರ ಯಾವತ್ತಿಗೂ ಕಾಂಗ್ರೆಸ್ ಪಾಲಿನ ಭದ್ರಕೋಟೆ. ಇದಕ್ಕೆ ಈ ಬಾರಿ ಜರುಗಿದ ವಿಧಾನ ಪರಿಷತ್ ಚುನಾವಣೆಯೇ ಸಾಕ್ಷಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಶಾಸಕ ಈಶ್ವರ ಖಂಡ್ರೆ, ನುಡಿದರು.
ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ, ಮಾತನಾಡಿದರು. ಬೆಲೆ ಏರಿಕೆ ವಿರುದ್ಧ ಜನರು ರೊಚ್ಚಿಗೆದ್ದಿದ್ದಾರೆ. ಕೇಂದ್ರ ಸರ್ಕಾರದ ಅಚ್ಛೆ ದಿನ್ ಘೋಷಣೆ ಪೊಳ್ಳಾಗಿದೆ.
ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ ಎಂದು ನುಡಿದರು. ಹುಮನಾಬಾದ್ ಶಾಸಕ ರಾಜಶೇಖರ್ ಮಾತನಾಡಿ ಬೀದರ್ ದಕ್ಷಿಣ ಕ್ಷೇತ್ರ ನಮ್ಮ ಪರಿವಾರಕ್ಕೆ ರಾಜಕೀಯ ಜೀವನ ನೀಡಿದ ಕ್ಷೇತ್ರ ಎಂದು ನುಡಿದರು. ಬೀದರ್ ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಅಶೋಕ್ ಖೇಣಿ ಮಾತನಾಡಿ ನಾನು ಶಾಸಕನಾಗಿದ್ದಾಗ
ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಮುಂದೆ ಶಾಸಕನಾಗಿ ಆಯ್ಕೆಯಾದರೆ ಉದ್ಯೋಗ, ಶಿಕ್ಷಣ ಹಾಗು ಸಕ್ಕರೆ ಕಾರ್ಖಾನೆಯನ್ನು ಪುನರುಜ್ಜಿವನ ಗೊಳಿಸುವ ಕುರಿತು ಮಾತು ನೀಡುತ್ತೇನೆ ಎಂದು ನುಡಿದರು.
ಬೀದರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಬಶೆಟ್ಟಿ ಮಾತನಾಡಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸೋಣ ಎಂದು ನುಡಿದರು. ಶಾಸಕ ರಹೀಮ್ ಖಾನ್, ಮೀನಾಕ್ಷಿ ಸಂಗ್ರಾಮ್, ಗೀತಾ ಪ0ಡಿತ್ ಚಿದ್ರಿ ಸೇರಿದಂತೆ ಇತರರು ಮಾತನಾಡಿ ಕಾಂಗ್ರೆಸ್‌ಗೆ ಬೆಂಬಲಿಸಲು ಕೋರಿದರು.
ಎಮ್.ಎಲ್.ಸಿಗಳಾದ ಅರವಿಂದ ಅರಳಿ, ಭೀಮರಾವ್ ಪಾಟೀಲ್, ಇನ್ನಿತರರು ಸಭೆಯಲ್ಲಿ ಹಾಜರಿದ್ದರು
ದಿಕ್ಸೂಚಿ ನ್ಯೂಸ್
ಶ್ರೀಮಂತರಾವ ಇಂಚುರೆ