ಲೇಖನಿಗೆ ಇತಿಹಾಸ ಬದಲಿಸುವ ಶಕ್ತಿಯಿದೆ.ಶಾಸಕ ರಾಜಶೇಖರ್ ಪಾಟೀಲ್
ಲೇಖನಿಗೆ ಇತಿಹಾಸ ಬದಲಿಸುವ ಶಕ್ತಿಯಿದೆ.
ಶಾಸಕ ರಾಜಶೇಖರ್ ಪಾಟೀಲ್
ಬೀದರ್ ಜಿಲ್ಲೆ, ಹುಮ್ನಾಬಾದ್ ಪಟ್ಟಣದ ತಾಲೂಕ ಪಂಚಾಯತ್ ಭವನದಲ್ಲಿ
ಇಂದು ಹುಮ್ನಾಬಾದ್ ಶಾಸಕ ರಾಜಶೇಖರ ಪಾಟೀಲ” ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕೋದ್ಯಮ ಸಂವಿಧಾನದ ನಾಲ್ಕನೆ ಅಂಗ, ಪತ್ರಿಕೋದ್ಯಮ ಒಂದು ವೃತ್ತಿ, ಒಂದು ಶಿಸ್ತು, “ಖಡ್ಗಕ್ಕಿಂತ ಲೇಖನಿಯೇ ಮೇಲು” ಎಂಬ ಮಾತಿನಂತೆ ಲೇಖನಿಗೆ ಇತಿಹಾಸವನ್ನು ಬದಲಿಸುಶಕ್ತಿ ಇದೆ, ಸಮಾಜದಲ್ಲಿ ನಮ್ಮ ನಡೆ-ನುಡಿಗಳನ್ನು ರೂಪಿಸುವಲ್ಲಿ ಪತ್ರಿಕೆಯ ಪಾತ್ರ ಮಹತ್ವ ಪೂರ್ಣವಾದುದು, ಕಾನೂನು ವಿಧಿಸುವ ಸೂತ್ರವನ್ನು, ಚೌಕಟ್ಟುನ್ನು, ಪರಂಪರೆಯ ಕರ್ತವ್ಯಗಳನ್ನು ಪಾಲಿಸಬೇಕಾಗುತ್ತದೆ. ಪತ್ರಿಕಾ ಮಾಧ್ಯಮ ಬಹಳಷ್ಟು ದೊಡ್ಡದಾಗಿ ಬೆಳೆದಿದ್ದು , ಸಾಮಾಜಿಕ ಬದಲಾವಣೆಯಲ್ಲಿ ಮಹತ್ವದ ಪಾತ್ರ ಹೊಂದಿದೆ. ಪತ್ರಕರ್ತರಿಗೆ ತಾಳ್ಮೆ ಮತ್ತು ಅವಧಾನ ಬಹಳ ಮುಖ್ಯವಾಗುತ್ತದೆ. ಪ್ರತಿಯೊಂದು ವಿಚಾರವನ್ನು ಸಮಾಜ ಮುಖಿಯಾಗಿ ಚಿಂತಿಸಿ ಅದರ ಬದಲಾವಣೆಗೆ ಪತ್ರಕರ್ತ ಪ್ರಯತ್ನಿಸಬೇಕು. ಕೇವಲ ವರದಿಯಿಂದಷ್ಟ್ಟೇ ಬದಲಾವಣೆಯ ಸಾಧ್ಯವಿಲ್ಲ, ಪತ್ರಿಕೆಗಳು ಬಡವರ ಶೋಷಿತ ವರ್ಗದ ಪರವಾದ ಧ್ವನಿಯಾಗಬೇಕು ಎಂದು ತಿಳಿಸಿದರು
ಸಭೆಯಲ್ಲಿ
MLC ಭೀಮರಾವ್ ಪಾಟೀಲ್ ತಾಲೂಕ ಪಂಚಾಯತ್ ಕಾರ್ಯನಿರ್ಕ ಅಧಿಕಾರಿ ಡಾ.ಗೋವಿಂದ್
ಪತ್ರಕರ್ತರ ಜಿಲ್ಲಾಧ್ಯಕ್ಷ ಅಶೋಕ್ ಕರಂಜಿ. ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಶಿವಕುಮಾರ ಸ್ವಾಮೀ ತಾಲೂಕ ಪತ್ರಕರ್ತರ ಸಂಘದ ಅಧ್ಯಕ್ಷ ದುರ್ಯೋಧನ ಹೂಗಾರ. ಚಿಟಗುಪ್ಪ ತಾಲೂಕ ಪತ್ರಕರ್ತ ಸಂಘದ ಅಧ್ಯಕ್ಷ ನವೀನ್ ಗಂಜಿ. ಸಭೆಯಲ್ಲಿ ಇನ್ನು ಸಭೆಯಲ್ಲಿ ಅನೇಕ ಗಣ್ಯರು ಹಾಜರಿದ್ದರು
ಶ್ರೀಮಂತರಾವ ಇಂಚುರೆ